ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ (NMPB)


ಭಾರತ ಸರ್ಕಾರವು ನವೆಂಬರ್ ೨೦೦೦ರಲ್ಲಿ ಔಷಧೀಯ ಸಸ್ಯಗಳ ವಲಯದ ಪದೋನ್ನತಿಗೆ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ ಎಂಬ ಉನ್ನತ ಸಂಸ್ಥೆಯನ್ನು ಸ್ಥಾಪಿಸಿತು. NMPB ಯ ಅಣತಿಯೇನೆಂದರೆ ಔಷಧೀಯ ಸಸ್ಯಗಳ ವಲಯದಲ್ಲಿ ಪ್ರವರ್ತಿಸುತ್ತಿರುವ ವಿವಿಧ ಮಂತ್ರಾಲಯ/ ಇಲಾಖೆಗಳ , ಸಂಘ-ಸಂಸ್ಥೆಗಳ ಚಟುವಟಿಕೆಗಳನ್ನು, ಕ್ರೂಢೀಕರಿಸಿ ಔಷಧೀಯ ಸಸ್ಯಗಳ ವಲಯದಲ್ಲಿ ಸುಧಾರಣೆಯನ್ನು ಉಂಟುಮಾಡುವುದು.

NMPB-ಪ್ರಾದೇಶಿಕ ಹಾಗೂ ಸಹಾಯಪ್ರದಾನ ಕೇಂದ್ರ (ದಕ್ಷಿಣ ವಲಯ)


NMPBಯು, ತನ್ನ ವಿವಿಧ ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ದೇಶದಾದ್ಯಂತ ಫಲಪ್ರದವಾಗಿ ನಡೆಸಿಕೊಂಡು ಹೋಗಲು ಸಹಾಯಕವಾಗಲೆಂದು, ದೇಶದ ವಿವಿಧ ಭಾಗಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು (Regional cum facilitation centres- RCFC) ಸ್ಥಾಪಿಸಿದೆ. ಕೇರಳ ರಾಜ್ಯದ ಪೀಚಿ ಎಂಬಲ್ಲಿರುವ ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ, ದಕ್ಷಿಣ ವಲಯದ ಪ್ರಾದೇಶಿಕ ಹಾಗೂ ಸಹಾಯಪ್ರದಾನ ಕೇಂದ್ರ (RCFC- Southern Region) ವನ್ನು ಸ್ಥಾಪಿಸಲಾಗಿದೆ.

NMPB-ಪ್ರಾದೇಶಿಕ ಹಾಗೂ ಸಹಾಯಪ್ರದಾನ ಕೇಂದ್ರ (ದಕ್ಷಿಣ ವಲಯ)ದ ಧ್ಯೇಯ


ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ, ಪಾಂಡಿಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಒಳಗೊಳ್ಳುವ ನಮ್ಮ ದೇಶದ ದಕ್ಷಿಣ ವಲಯದಲ್ಲಿ ಔಷಧೀಯ ಸಸ್ಯಗಳಿಗೆ ಸಂಬಂಧಪಟ್ಟ ವಿವಿಧ ಮೇಖಲೆಗಳಿಗೆ ಬೇಕಾದ ಮಾರ್ಗದರ್ಶನ ಹಾಗೂ ಸಹಾಯವನ್ನು ನೀಡುವುದು ಈ ಕೇಂದ್ರದ ಧ್ಯೇಯವಾಗಿದೆ.

ಯೋಜನೆಯ ಸಹಭಾಗಿಗಳು

ಔಷಧೀಯ ಸಸ್ಯಗಳ ಗ್ಯಾಲರಿ

ಪ್ರಾದೇಶಿಕ ಹಾಗೂ ಸಹಾಯಪ್ರದಾನ ಕೇಂದ್ರ (ದಕ್ಷಿಣ ವಲಯ)ದ ಉದ್ದೇಶಗಳು

  • ದಕ್ಷಿಣ ಭಾರತದಲ್ಲಿ, ಎನ್‍ಎಂಪಿಬಿಯು ಹಮ್ಮಿಕೊಳ್ಳುವ ವಿವಿಧ ಚಟುವಟಿಕೆಗಳನ್ನು ಸಂಘಟಿಸುವುದು.

  • ದಕ್ಷಿಣ ಭಾರತದಲ್ಲಿ, ಔಷಧೀಯ ಸಸ್ಯಗಳ ವಲಯದಲ್ಲಿ ಪ್ರವರ್ತಿಸುತ್ತಿರುವ ವಿವಿಧ ಇಲಾಖೆಗಳ, ಸಂಘ-ಸಂಸ್ಥೆಗಳ ಚಟುವಟಿಕೆಗಳನ್ನು ಕ್ರೋಢಿಕರಿಸಿ, ಔಷಧೀಯ ಸಸ್ಯಗಳ ವಲಯಗಳಲ್ಲಿ ಸುಧಾರಣೆಯನ್ನು ಉಂಟುಮಾಡುವುದು.

  • ಔಷಧೀಯ ಸಸ್ಯಗಳ ಗುಣಮಟ್ಟದ ಸಸಿ ಹಾಗೂ ಇತರೆ ನೆಡುವ ವಸ್ತುಗಳ (ಕ್ವಾಲಿಟಿ ಪ್ಲಾಂಟಿಂಗ್ ಮೆಟಿರಿಯಲ್ಸ್) ಉತ್ಪಾದನೆ, ಕೃಷಿ, ಸಂರಕ್ಷಣೆ, ಬೆಳೆ ಕೊಯ್ಲು, ಅಲ್ಪ-ಸಂಸ್ಕರಣೆ, ಮೌಲ್ಯವರ್ಧನೆ, ಸಂಗ್ರಹಣೆ, ವ್ಯಾಪಾರ ಹಾಗೂ ಗುಣಮಟ್ಟದ ನಿಯಂತ್ರಣ ಹೀಗೆ ವಿವಿಧ ನಿಟ್ಟಿನಲ್ಲಿ ಬೆಳೆಗಾರರ ಹಾಗೂ ವಹಿವಾಟುದಾರರ ತಾಂತ್ರಿಕ ಮತು ನಿರ್ವಹಣ ಕೌಶಲ್ಯವನ್ನು ವರ್ಧಿಸುವುದು.

  • ತರಬೇತಿ, ಕಾರ್ಯಾಗಾರ, ವಿಚಾರ ಗೋಷ್ಠಿ ಮತ್ತು ಸಮ್ಮೇಳನಗಳನ್ನು ನಡೆಸಲು ಅವಶ್ಯವಾದ ಆರ್ಥಿಕ ಹಾಗೂ ತಾಂತ್ರಿಕ ಸಹಾಯವನ್ನು ನೀಡುವುದು.

  • ಅಳಿವಿನಂಚಿನಲ್ಲಿರುವ ಮತ್ತು ಹೆಚ್ಚಿನ-ಬೇಡಿಕೆಯಲ್ಲಿರುವ ಔಷಧೀಯ ಸಸ್ಯಗಳ ಸುಧಾರಿತ ಕೃಷಿ ಪದ್ದತಿಗಳನ್ನು ಅಭಿವೃದ್ಧಿಪಡಿಸಲು ಅವಶ್ಯವಾದ ಸಹಾಯ-ಸಹಕಾರವನ್ನು ನೀಡುವುದು.

  • ಆಯಾ-ಪ್ರದೇಶಗಳಿಗೆ ಸೂಕ್ತವಾದ ಔಷಧೀಯ ಸಸ್ಯಗಳ ಗುಣಮಟ್ಟದ ಸಸಿ ಹಾಗೂ ಇತರೆ ನೆಡುವ ವಸ್ತುಗಳ (ಕ್ವಾಲಿಟಿ ಪ್ಲಾಂಟಿಂಗ್ ಮೆಟಿರಿಯಲ್ಸ್) ಉತ್ಪಾದನೆಗೆ ಅನುಕೂಲ ಕಲ್ಪಿಸುವುದು. .

  • ಔಷಧೀಯ ಸಸ್ಯೋತ್ಪನ್ನಗಳ ಮಾರಾಟವನ್ನು ಬಲಪಡಿಸುವುದು ಹಾಗೂ ಪ್ರೋತ್ಸಾಹಿಸುವುದು.

  • ಎನ್‍ಎಂಪಿಬಿಯು ಪ್ರಾಮುಖ್ಯತೆ ನೀಡಿರುವ ಸಂಶೋಧನೆ ಹಾಗೂ ಆಭಿವೃದ್ಧಿ ಕಾರ್ಯಕ್ರಮಗಳಿಗೆ ಪೂರಕವಾಗಬಲ್ಲ ಯೋಜನೆಗಳನ್ನು ರೂಪಿಸಲು ಹಾಗೂ ಅನುಷ್ಠಾನಕ್ಕೆ ತರಲು, ವಿವಿಧ ಸಂಘಟನೆಗಳಿಗೆ ಸಹಾಯವನ್ನು ನೀಡುವುದು.

  • ಎನ್‍ಎಂಪಿಬಿಯ ಸಹಾಯದಿಂದ ಸಂಪೂರ್ಣಗೊಳಿಸಿರುವ ಎಲ್ಲ ಚಟುವಟಿಕೆಗಳ ಕುರಿತಾದ ಮಾಹಿತಿಗಳನ್ನು ಸಂಗ್ರಹಿಸಿ, ಯಶೋಗಾಥೆಗಳನ್ನು ಪಸರಿಸುವುದು.